ಮಾಸ್ಕೋ : ಉಕ್ರೇನ್ ಮೇಲಿನ ಆಕ್ರಮಣದ ನಂತರ ನಾನಾ ರೀತಿಯ ನಿರ್ಬಂಧಕ್ಕೆ ಒಳಗಾಗಿ ವಿದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಕಡಿತಕ್ಕೊಳಗಾಗಿರುವ ರಷ್ಯಾ, ಇದೀಗ ಅಗತ್ಯ ವೈದ್ಯಕೀಯ ಉಪಕರಣ ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿದೆ.ಈ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಬೇಕಾದ ವೈದ್ಯಕೀಯ ಉಪಕರಣಗಳು ಮತ್ತು ಅವುಗಳ ಪೂರೈಕೆ ವಿಧಿವಿಧಾನ ಕುರಿತು ಚರ್ಚಿಸಲು ಭಾರತ ಹಾಗೂ ರಷ್ಯಾದ ವೈದ್ಯಕೀಯ ಉತ್ಪನ್ನಗಳ ಕಂಪನಿಗಳು ಏ.22ರಂದು ವರ್ಚುವಲ್ ಆಗಿ ಸಭೆ ನಡೆಸಲಿವೆ.ಇದರಲ್ಲಿ ವ್ಯಾಪಾರ ವೃದ್ಧಿಸುವ ಮಾರ್ಗಗಳ ಮಾತುಕತೆ ನಡೆಯಲಿದೆ