ವಾಷಿಂಗ್ಟನ್ : ನಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ತಿಳಿಸಿದ್ದಾರೆ.ಉಕ್ರೇನ್ ಸೇನೆಯು ದಾಳಿಯನ್ನು ನಿಲ್ಲಿಸಿದ ನಂತರ, ನಾವು ಅವರ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ. ಈ ವೇಳೆ ಪುಟಿನ್ ಅವರು ಸಶಸ್ತ್ರೀಕರಣದ ಕುರಿತು ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ ಎಂದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ.ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಹಿನ್ನೆಲೆ, ಖಾರ್ಕಿವ್ ಸಿಟಿಯಲ್ಲಿ ಮತ್ತೆ ಬಾಂಬ್ ಬ್ಲಾಸ್ಟ್ ಆರಂಭವಾಗಿದೆ.