ಮಾಸ್ಕೋ : ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ ತಿಂಗಳಾಗುತ್ತಿದೆ. ಈ ನಡುವೆಯೇ ರಷ್ಯಾ ಹೊಸ ಪರಮಾಣು ಸಾಮರ್ಥ್ಯದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ.ಇದು ಭೂಮಿಯ ಯಾವುದೇ ಭಾಗವನ್ನೂ ತಲುಪುವ ಸಾಮರ್ಥ್ಯ ಹೊಂದಿದೆ. ವರ್ಷಗಳಿಂದ ಅಭಿವೃದ್ಧಿ ಪಡಿಸಲಾಗಿರುವ ಸರ್ಮ್ಯಾಟ್ ಕ್ಷಿಪಣಿಯನ್ನು ರಷ್ಯಾದ ಪ್ಲೆಸೆಟ್ಸ್ಕ್ ನಿಂದ ಇದೇ ಮೊದಲ ಬಾರಿಗೆ ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಗಿದೆ.ಇದು ಸುಮಾರು 6,000 ಕಿ.ಮೀ ದೂರದ ಕಮ್ಚಾಟ್ಕಾ ದ್ವೀಪದಲ್ಲಿನ ಗುರಿಯನ್ನು ಹೊಡೆದಿದೆ ಎಂದು ರಷ್ಯಾ ಬುಧವಾರ ತಿಳಿಸಿದೆ.