ಮಾಸ್ಕೋ : ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದಾಗಿನಿಂದ ವಿದೇಶೀ ವಿನಿಮಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಷ್ಯಾ ಸೆಂಟ್ರಲ್ ಬ್ಯಾಂಕ್ ತನ್ನ ಆರ್ಥಿಕತೆಯನ್ನು ಕಾಪಾಡಲು ಬಡ್ಡಿ ದರದಲ್ಲಿ ಭಾರೀ ಏರಿಕೆ ಮಾಡಿದೆ. ರಷ್ಯಾ ಸೆಂಟ್ರಲ್ ಬ್ಯಾಂಕ್ನ ಬಡ್ಡಿ ದರ ಈ ಹಿಂದೆ ಶೇ.9.5 ಇದ್ದು, ಇದೀಗ ಶೇ.20 ಕ್ಕೆ ಏರಿಕೆ ಮಾಡಿದೆ. ಈ ಮೂಲಕ ರಷ್ಯಾ ತನ್ನ ಹೂಡಿಕೆದಾರರನ್ನು ಕಾಪಾಡಲು ಪ್ರಯತ್ನಿಸುತ್ತಿದೆ.ರಷ್ಯಾ ಸೆಂಟ್ರಲ್ ಬ್ಯಾಂಕ್ ಸೋಮವಾರ