ಮೂರು ವಾರ ಕಳೆದರೂ ಉಕ್ರೇನನ್ನು ಮಣಿಸಲು ಸಾಧ್ಯವಾಗದೆ ಸಿಟ್ಟಿಗೆದ್ದಿರುವ ರಷ್ಯಾ ಭಾನುವಾರ ಸತತ ಎರಡನೇ ದಿನ ಶಬ್ದಾತೀತ ಕ್ಷಿಪಣಿ ‘ಕಿಂಝಾಲ್’ ಬಳಸಿ ಮಾರಕ ದಾಳಿ ನಡೆಸಿದೆ. ಡೆಲಿಟ್ಯನ್ ಎಂಬ ಸ್ಥಳದಲ್ಲಿರುವ ಭೂಗತ ಶಶಾತ್ರಸ್ತ್ರ ಸಂಗ್ರಹಾಗಾರದ ಮೇಲೆ ಕಿಂಝಾಲ್ ದಾಳಿ ನಡೆಸಿದ್ದ ರಷ್ಯಾ, ಭಾನುವಾರ ಕೋಸ್ತಿಯಾಂತಿನಿವ್ಕಾ ಎಂಬಲ್ಲಿರುವ ತೈಲ ಸಂಗ್ರಹಾಗಾರದ ಮೇಲೆ ಅದೇ ಕ್ಷಿಪಣಿ ಬಳಸಿ ಬಾಂಬ್ ದಾಳಿ ನಡೆಸಿ ನಾಶಗೈದಿದೆ. ಇದನ್ನು ಸ್ವತಃ ರಷ್ಯಾದ ಮಿಲಿಟರಿಯೇ ಅಧಿಕೃತವಾಗಿ ತಿಳಿಸಿದೆ.ಕಿಂಝಾಲ್