ಶಾಂಘೈ : ಚೀನಾದ ಶಾಂಘೈ ನಗರದಲ್ಲಿ ಲಾಕ್ಡೌನ್ ಘೋಷಣೆಯ ಹಿನ್ನೆಲೆಯಲ್ಲಿ ಜನರು ಆಹಾರ ಸಿಗದೇ ಹಸಿವಿನಿಂದ ಕಂಗೆಟ್ಟಿದ್ದಾರೆ.ಸರ್ಕಾರದ ಆದೇಶದ ಮೇರೆಗೆ ನಗರದಲ್ಲಿರುವ ಎಲ್ಲ 2.5 ಕೋಟಿ ಜನರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಇವರು ಆಹಾರ ಸಾಮಗ್ರಿಗಳನ್ನು ತರಲು ಕೂಡಾ ಮನೆಯಿಂದ ಆಚೆ ಹೋಗುವಂತಿಲ್ಲ.ನಗರದಲ್ಲಿ ಆಹಾರವನ್ನು ಮನೆ ಬಾಗಿಲಿಗೆ ತಂದು ಕೊಡುವ ಡಿಲಿವರಿ ಬಾಯ್ಗಳ ತೀವ್ರ ಕೊರತೆಯಿದೆ. ಹೀಗಾಗಿ ಸರ್ಕಾರವೇ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಮನೆಯ ಬಳಿ ತಲುಪಿಸುವುದಾಗಿ ಹೇಳಿದರೂ