ಕೀವ್ : ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಭೀಕರ ಯುದ್ಧ, ರಕ್ತಪಾತದ ನಡುವೆಯೂ ಯಾವೊಬ್ಬ ದೇಶವೂ ಶರಣಾಗುವ ಹಂತಕ್ಕೆ ಬಂದಿಲ್ಲ.ಆದರೆ ಉಕ್ರೇನ್ ಅಧ್ಯಕ್ಷನ ನಕಲಿ ಟೆಲಿಗ್ರಾಮ್ ಖಾತೆ ಸೈನಿಕರಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಿದೆ. ಉಕ್ರೇನ್ ಅಧ್ಯಕ್ಷನ ಟೆಲಿಗ್ರಾಮ್ ಖಾತೆಯಂತೆಯೇ ಹೋಲುವ ನಕಲಿ ಖಾತೆಯೊಂದರಲ್ಲಿ ಉಕ್ರೇನ್ ಯೋಧರಿಗೆ ಶರಣಾಗುವಂತೆ ಸಂದೇಶ ನೀಡಲಾಗಿತ್ತು. ಈ ಸಂದೇಶ ದೇಶಾದ್ಯಂತ ವೈರಲ್ ಆಗುತ್ತಿದ್ದಂತೆ ಸೈನಿಕರಲ್ಲಿ ಗೊಂದಲ ಏರ್ಪಟ್ಟಿತು.ಈ ಮಾಹಿತಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ಎಚ್ಚೆತ್ತು,