Widgets Magazine

ಬಸ್ಸಿನಲ್ಲಿದ್ದ ವ್ಯಕ್ತಿಯ ಮಾಸ್ಕ್ ನೋಡಿ ಬೆಚ್ಚಿಬಿದ್ದ ಪ್ರಯಾಣಿಕರು!

ಸಾಲ್ಪೋರ್ಡ್| pavithra| Last Modified ಶನಿವಾರ, 19 ಸೆಪ್ಟಂಬರ್ 2020 (09:32 IST)
ಸಾಲ್ಪೋರ್ಡ್ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಧರಿಸಿದ ಮಾಸ್ಕ್ ನೋಡಿ ಅಲ್ಲಿದ್ದ ಪ್ರಯಾಣಿಕರು ಹೌಹಾರಿದ ಘಟನೆ ಮ್ಯಾಂಚೆಸ್ಟರ್ ನಲ್ಲಿ ನಡೆದಿದೆ.

ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎನ್ನಲಾಗಿತ್ತು. ಆದಕಾರಣ ಸ್ವಿಂಟನ್ ನಿಂದ ಮ್ಯಾಂಚೆಸ್ಟರ್ ಗೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ  ವ್ಯಕ್ತಿಯೊಬ್ಬ ಹಾವನ್ನು ಕತ್ತಿಗೆ ಸುತ್ತಿಕೊಂಡು ಮಾಸ್ಕ್ ರೀತಿ ಧರಿಸಿ ಬಸ್ ಹತ್ತಿದ್ದಾನೆ. ಮೊದಲು ಎಲ್ಲರೂ ಇದು ತಮಾಷೆ ಎಂದಿಕೊಂಡಿದ್ದರು. ಬಳಿಕ ಇದನ್ನು ಸರಿಯಾಗಿ ನೋಡಿದ ಪ್ರಯಾಣಿಕರು ಭಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಸೂಕ್ತವಾದ ಮಾಸ್ಕ್ ಧರಿಸುವಂತೆ ಸರ್ಕಾರ ಸೂಚಿಸಬೇಕು ಎಂದು ತಿಳಿಸಿದ್ದಾರೆ. ಹಾಗೇ ವೈದ್ಯರು ಕೂಡ ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ‍್ಳಲು ಹಾವಿನ ಮಾಸ್ಕ್ ಧರಿಸುವುದು ಒಳ್ಳೆಯದಲ್ಲ ಎಂದು ತಿಳಿಸಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :