ಬೀಜಿಂಗ್ : ಹಾಂಕಾಂಗ್ನ ಪ್ರಸಿದ್ಧ ಜಂಬೋ ರೆಸ್ಟೋರೆಂಟ್ ಚೀನಾದ ದಕ್ಷಿಣ ಭಾಗದ ಸಮುದ್ರದಲ್ಲಿ 1,000 ಅಡಿಗೂ ಅಧಿಕ ಆಳಕ್ಕೆ ಮುಳುಗಿ ಹೋಗಿದೆ. 46 ವರ್ಷಗಳಿಂದ ಒಂದೇ ನೆಲೆಯಲ್ಲಿದ್ದ ಫ್ಲೋಟಿಂಗ್ ರೆಸ್ಟೋರೆಂಟ್ ಅನ್ನು ಬೇರೆಡೆಗೆ ಸ್ಥಳಾಂತರಿಸಲು ಟಗ್ಬೋಟ್ ಸಹಾಯದಿಂದ ಎಳೆದುಕೊಂಡು ಹೋಗಲಾಗಿತ್ತು.ಈ ಸಂದರ್ಭ ದಕ್ಷಿಣ ಚೀನಾ ಸಮುದ್ರದ ಭಾರೀ ಅಲೆಯ ಕಾರಣ ಜಂಬೋ ರೆಸ್ಟೋರೆಂಟ್ ಮಗುಚಿ ಬಿದ್ದಿದೆ. ಅದನ್ನು ನೀರಿನಿಂದ ಮೇಲೆತ್ತುವುದು ಅತ್ಯಂತ ಕಷ್ಟಕರವಾಗಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ