ವಾಷಿಂಗ್ಟನ್ : ಭಾರತ ವಿಶ್ವದಲ್ಲಿಯೇ 2ನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಮಾತ್ರವಲ್ಲದೇ ಆ ಜನಸಂಖ್ಯೆ ಬೆಳೆಯುತ್ತಲೇ ಇದೆ. ಭಾರತದಲ್ಲಿ ಮುಸ್ಲಿಮರು ಪಾಶ್ಚಿಮಾತ್ಯರ ಗ್ರಹಿಕೆಗಿಂತ ಚೆನ್ನಾಗಿಯೇ ಇದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸೋಮವಾರ ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದಲ್ಲಿ ಮುಸ್ಲಿಮರ ಬಗೆಗಿನ ಪಾಶ್ಚಿಮಾತ್ಯ ರಾಷ್ಟ್ರಗಳ ಗ್ರಹಿಕೆಯನ್ನು ಅಲ್ಲಗಳೆದಿರುವ ಸೀತಾರಾಮನ್, ಒಂದು ವೇಳೆ ವಾಸ್ತವದಲ್ಲಿ ಈ ಗ್ರಹಿಕೆ ನಿಜವಾಗಿದ್ದರೆ ಭಾರತದಲ್ಲಿ ಮುಸ್ಲಿಮರ