ಲಂಡನ್(ಆ.10): ಪಿಎನ್ಬಿ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಗಡಿಪಾರು ಭೀತಿ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್ ಮೋದಿಗೆ, ಈ ಆದೇಶದ ವಿರುದ್ಧ ಖಿನ್ನತೆ ಮತ್ತು ಆತ್ಮಹತ್ಯೆ ಅಪಾಯದ ಅಂಶಗಳಡಿ ಮೇಲ್ಮನವಿ ಸಲ್ಲಿಸಲು ಲಂಡನ್ನ ಹೈಕೋರ್ಟ್ ಅನುಮತಿ ನೀಡಿದೆ. ಒಂದು ವೇಳೆ ಈ ಮೇಲ್ಮನವಿಯಲ್ಲಿ ನೀಮೋ ವಾದ ಅಂಗೀಕಾರಗೊಂಡರೆ, ಬ್ರಿಟನ್ ಸರ್ಕಾರ, ನೀಮೋನನ್ನು ಭಾರತಕ್ಕೆ ಗಡಿಪಾರು ಮಾಡಲು ನಿರಾಕರಿಸಬಹುದಾಗಿರುತ್ತದೆ. ಪ್ರಕರಣ ಸಂಬಂಧ ಈಗಾಗಲೇ ನೀಮೋ ಖಿನ್ನತೆಗೆ ಒಳಗಾಗಿದ್ದಾರೆ. ಅಲ್ಲದೆ ಗಡಿಪಾರು ಮಾಡಿದರೆ ನೀಮೋ ಅವರನ್ನು