ಇಂತಹ ಸೃಷ್ಟಿವೈಚಿತ್ರ್ಯ 33 ವರ್ಷಗಳ ನಂತರ ಸಂಭವಿಸುತ್ತಿದೆ. ಮತ್ತೊಂದು ವೈಚಿತ್ರ್ಯಕ್ಕೆ 18 ವರ್ಷಗಳ ಕಾಲ ಕಾಯಬೇಕಾಗುತ್ತದೆ. ಮುಂದಿನ ಭಾನುವಾರ ಸಂಜೆ ಪೂರ್ಣ ಚಂದ್ರಗ್ರಹಣದ ಜತೆ ಸೂಪರ್ಮೂನ್ ದರ್ಶನ ಖಗೋಳವೀಕ್ಷಕರನ್ನು ಬೆಕ್ಕಸುಬೆರಗುಗೊಳಿಸಲಿದೆ. ಪೂರ್ಣ ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನನ್ನು ಆವರಿಸಿದಾಗ ಕೆಂಪು ಬಣ್ಣದಲ್ಲಿರುವುದರಿಂದ ಅದಕ್ಕೆ ರಕ್ತವರ್ಣದ ಚಂದ್ರ ಎಂಬ ಉಪನಾಮವಿದೆ. ಇದು ಭೂಮಿಯ ಸಂಪೂರ್ಣ ನೆರಳಿನಲ್ಲಿದ್ದರೂ ಸೂರ್ಯನ ಕೆಂಪುವರ್ಣದ