ಕಾಬೂಲ್ : ಅಲ್ಖೈದಾ ಮುಖ್ಯಸ್ಥ ಆಯ್ಮನ್ ಅಲ್ ಝವಾಹಿರಿಯ ಹತ್ಯೆಯನ್ನು ತಾಲಿಬಾನ್ ದೃಢಪಡಿಸಿದ್ದು, ಕಾಬೂಲ್ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಗೆ ಖಂಡನೆ ವ್ಯಕ್ತಪಡಿಸಿದೆ. ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿದ್ದು, ರಾಜಧಾನಿಯ ನಿವಾಸದ ಮೇಲೆ ದಾಳಿ ನಡೆದಿದೆ. ಇದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂದು ಖಂಡಿಸಿದ್ದಾರೆ. ಟೋಲೋ ನ್ಯೂಸ್ ಪ್ರಕಾರ, ಭಾನುವಾರ ಮುಂಜಾನೆ ಕಾಬೂಲ್ನಲ್ಲಿ ದೊಡ್ಡ ಸ್ಫೋಟವೊಂದು ಪ್ರತಿಧ್ವನಿಸಿತು.ಶೆರ್ಪೂರ್ನಲ್ಲಿ ಮನೆಯೊಂದಕ್ಕೆ ರಾಕೆಟ್ ಅಪ್ಪಳಿಸಿತು. ಮನೆ ಖಾಲಿಯಾಗಿದ್ದರಿಂದ ಯಾವುದೇ ಪ್ರಾಣಹಾನಿ