ಕಾಬೂಲ್ : ಕಳೆದ ವರ್ಷ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ 1 ವರ್ಷಕ್ಕಿಂತಲೂ ಹೆಚ್ಚು ಕಾಲ ಹೆಣ್ಣುಮಕ್ಕಳಿಗೆ ಪ್ರೌಢಶಾಲೆಗೆ ಹೋಗಲು ನಿರ್ಬಂಧಿಸಿದ್ದು, ಇದೀಗ ಈ ವಾರ ನಡೆಯಲಿರುವ ಪ್ರೌಢಶಾಲಾ ಪರೀಕ್ಷೆಯನ್ನು ಬರೆಯಲು ಹೆಣ್ಣುಮಕ್ಕಳಿಗೂ ಅನುಮತಿ ನೀಡಿದೆ.ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 31 ಪ್ರಾಂತ್ಯಗಳಿಗೆ ತಾಲಿಬಾನ್ನ ನಿರ್ಧಾರ ಅನ್ವಯಿಸುತ್ತದೆ. ಪ್ರೌಢಶಾಲಾ ಪರೀಕ್ಷೆ ಬುಧವಾರದಿಂದ ಪ್ರಾರಂಭವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.ಪರೀಕ್ಷೆಯನ್ನು ವಿದ್ಯಾರ್ಥಿನಿಯರು ಕೂಡಾ ಬರೆಯಲು ಅನುಮತಿಸಲಾಗುವುದು ಎಂದು