ರಾಮನಗರ : ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಆದಾಗಿನಿಂದ ಒಂದಲ್ಲ ಒಂದು ಸಮಸ್ಯೆಯಿಂದ ಸುದ್ದಿಯಾಗುತ್ತಿದೆ. ಈಗ ತಾಂತ್ರಿಕ ಸಮಸ್ಯೆಯಿಂದ ಟೋಲ್ ಪ್ಲಾಜಾದಲ್ಲಿ ವಾಹನ ಸವಾರರ ಫಾಸ್ಟ್ ಟ್ಯಾಗ್ನಿಂದ ಪದೇ ಪದೇ ಹಣ ಕಡಿತಗೊಂಡು ಮತ್ತೆ ಸುದ್ದಿಯಾಗಿದೆ.