ತೈವಾನ್ ನಲ್ಲಿ ಸಲಿಂಗ ವಿವಾಹಕ್ಕೆ ಅಸ್ತು ಎಂದ ಸರ್ಕಾರ

ತೈವಾನ್, ಶನಿವಾರ, 18 ಮೇ 2019 (07:25 IST)

ತೈವಾನ್ : ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಲ್ಲಿ ಸಲಿಂಗ ವಿವಾಹವನ್ನು ಸಕ್ರಿಯಗೊಳಿಸಲಾಗಿತ್ತು. ಆದರೆ ಇದೀಗ ತೈವಾನ್ ನಲ್ಲಿ ಸಲಿಂಗ ವಿವಾಹ ಸಕ್ರಮ ಎನ್ನುವ ವಿಧೇಯಕ್ಕೆ ತೈವಾನ್ ಸಂಸತ್ತು ಅನುಮೋದನೆ ನೀಡುದ್ದು, ಆ ಮೂಲಕ ಏಷ್ಯಾ ಖಂಡದಲ್ಲಿ ಸಲಿಂಗ ವಿವಾಹವನ್ನು ಅಧಿಕೃತಗೊಳಿಸಿದ ಮೊದಲ ರಾಷ್ಟ್ರ ತೈವಾನ್ ಎಂಬ ಖ್ಯಾತಿ ಪಡೆದುಕೊಂಡಿದೆ.ಕಳೆದ 10 ವರ್ಷಗಳಲ್ಲಿ ಸಲಿಂಗಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ತೈವಾನ್‌ನಲ್ಲಿ ಭಾರಿ ಹೋರಾಟಗಳು ನಡೆದಿತ್ತು. ಸಲಿಂಗಿಗಳಿಗೆ ವಿವಾಹಕ್ಕೆ ಅವಕಾಶ ನೀಡದಿದ್ದರೆ ಸಂವಿಧಾನದ ಉಲ್ಲಂಘನೆಯಾಗಲಿದೆ ಎಂದು ಎರಡು ವರ್ಷಗಳ ಹಿಂದೆ ತೈವಾನ್‌ನ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. 2019ರ ಮೇ 24ರೊಳಗೆ ವಿವಾಹ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಸಲಿಂಗ ವಿವಾಹ ಸಕ್ರಮ ಕಾನೂನು ರೂಪಿಸಲು ಸರಕಾರಕ್ಕೆ ಸೂಚಿಸಿತ್ತು.


 

ಅದರಂತೆ ಇದೀಗ ಸಲಿಂಗ ವಿವಾಹದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ನಡೆಸಿದ ಜನಮತದಲ್ಲಿ  ಬಾರೀ ಪ್ರಮಾಣದ ಮತ ಬಂದಿದ್ದ ಹಿನ್ನಲೆಯಲ್ಲಿ ತೈವಾನ್ ಸರಕಾರ ಸಲಿಂಗ ವಿವಾಹಕ್ಕೆ ಒಪ್ಪಿಗೆ ಸೂಚಿಸಿದೆ. ಹಾಗೇ ಸಲಿಂಗಿಗಳು ತಮ್ಮ ವಿವಾಹವನ್ನು ಸರಕಾರದಲ್ಲಿ ನೋಂದಣಿ ಮಾಡಿಸಲು ಕೂಡ ಅವಕಾಶ ನೀಡಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತನ್ನ ಚಿತ್ರವಿರುವ ಸಾಕ್ಸ್ ಧರಿಸಿದ ಅಧಿಕಾರಿಗೆ ಟ್ರಂಪ್ ಮಾಡಿದ್ದೇನು ಗೊತ್ತಾ?

ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯನ್ನು ಒಪ್ಪದವರು ಅವರನ್ನು ಹೇಗೆ ...

news

ಮಾಜಿ ಶಾಸಕ ಸಂಭಾಜಿ ಪಾಟೀಲ್ ನಿಧನ

ಬೆಳಗಾವಿ : ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯ ಮುಖಂಡ ಹಾಗೂ ಮಾಜಿ ಶಾಸಕ ಸಂಭಾಜಿ ಪಾಟೀಲ್ ಶುಕ್ರವಾರ ...

news

ನಾಯಿ- ನರಿಗಳಂತೆ ಮೈತ್ರಿ ಸರಕಾರದವರ ಕಚ್ಚಾಟ

ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಮ್ಮೆ ಸಿಎಮ್ ಆಗುವ ಅವಕಾಶ ಬಂದಿದೆ. ಮತದಾರರು ಭ್ರಷ್ಟ ಸಮ್ಮಿಶ್ರ ಸರ್ಕಾರ ...

news

ಡಿಕೆಶಿ ವಿರುದ್ಧ ಕೈ ಮುಖಂಡರ ಅಸಮಧಾನ ಸ್ಫೋಟ

ಕುಂದಗೋಳಕ್ಕೆ ಯಾರು ಕಾಂಗ್ರೇಸ್ ನಾಯಕರು??? ಹೀಗಂತ ಕೈ ಪಡೆಯ ನಾಯಕರೇ ಸಾಮಾಜಿಕ ಜಾಲತಾಣದಲ್ಲಿ ಸಚಿವ ...