ನ್ಯೂಯಾರ್ಕ್: ಜೀವನದಲ್ಲಿ ಎಷ್ಟು ಬಾರಿ ಮದುವೆಯಾಗಬಹುದು: ಒಂದು, ಎರಡು ಅಥವಾ ಮೂರು. ಆದರೆ ಈ ಮಹಿಳೆಗೆ 11 ಬಾರಿ ಮದುವೆಯಾಗಿದ್ದರೂ ಸಾಕಾಗದೇ ಈಗ 12 ನೇ ಮದುವೆಗೆ ಪ್ರಯತ್ನಿಸುತ್ತಿದ್ದಾಳಂತೆ!ಅಮೆರಿಕಾದ ಖ್ಯಾತ ಇಂಟೀರಿಯರ್ ಡಿಸೈನರ್ ಆಗಿರುವ ಮೊನೆಟ್ ಡಯಾಸ್ ಎಂಬಾಕೆ 11 ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದಾಳೆ. ಇದೀಗ 12 ನೇ ಬಾರಿಗೆ ಮದುವೆಯಾಗಲು ವರನ ಹುಡುಕಾಟದಲ್ಲಿದ್ದಾಳಂತೆ.ಈಕೆಗೆ ಮದುವೆಯಾಗುವುದೇ ಒಂದು ಹವ್ಯಾಸವಾಗಿಬಿಟ್ಟಿದೆ. ಹೆಚ್ಚೆಂದರೆ 2 ತಿಂಗಳು ಜೊತೆಗಿದ್ದ ಸೋಡಾ ಚೀಟಿ ಕೊಡುತ್ತಾಳಂತೆ.