ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿತಿ ಗತಿ ಬಗ್ಗೆ ಈ ಹಿಂದೆ ವರದಿಯಾಗಿದ್ದೆಲ್ಲವೂ ಸುಳ್ಳು ಎಂದು ಗುಪ್ತಚರ ಮೂಲಗಳು ಹೇಳಿವೆ. ದಾವೂದ್ ಸಾಯುವ ಸ್ಥಿತಿಯಲ್ಲಿದ್ದಾನೆ. ಆತನ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಂಗಾಂಗ ವೈಪಲ್ಯಕ್ಕೊಳಗಾಗಿದ್ದಾನೆ ಎಂಬುದೆಲ್ಲಾ ಸುಳ್ಳು ಎಂದು ತಿಳಿದುಬಂದಿದೆ. ಆತ ಇನ್ನೂ ಬದುಕಿದ್ದಾನೆ ಎಂದು ಗುಪ್ತಚರ ಮೂಲಗಳು ಹೇಳಿವೆ.ಪಾಕಿಸ್ತಾನದ ಗೂಢಚರ ಇಲಾಖೆ ಐಎಸ್ಐಯ ಭದ್ರತೆಯಲ್ಲಿ ಆತ ಸುರಕ್ಷಿತವಾಗಿದ್ದಾನೆ ಎನ್ನಲಾಗಿದೆ. 1993 ರ ಮುಂಬೈ ಸ್ಪೋಟದ