ಮಲೇರಿಯಾ ಔಷಧಿ ಸಿಕ್ಕ ಕೂಡಲೇ ವರಸೆ ಬದಲಿಸಿದ ಅಮೆರಿಕಾ

ನವದೆಹಲಿ| Krishnaveni K| Last Modified ಗುರುವಾರ, 9 ಏಪ್ರಿಲ್ 2020 (09:41 IST)
ನವದೆಹಲಿ: ಕೊರೋನಾಗೆ ಭಾರತದಿಂದ ಮಲೇರಿಯಾ ಔಷಧಿ ಪಡೆಯಲು ಮೊದಲು ಬೆದರಿಕೆ ತಂತ್ರಕ್ಕೆ ಮೊರೆ ಹೋಗಿದ್ದ ಅಮೆರಿಕಾ ಅಧ‍್ಯಕ್ಷ ಡೊನಾಲ್ಡ್ ಟ್ರಂಪ್ ಈಗ ವರಸೆ ಬದಲಿಸಿದ್ದಾರೆ.
 > ಭಾರತ ಮಲೇರಿಯಾಗೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿಯನ್ನು ರಫ್ತು ಮಾಡಲು ಇರುವ ನಿರ್ಬಂಧ ತೆರವುಗೊಳಿಸಲು ಅಮೆರಿಕಾ ಸೇರಿದಂತೆ ಅಗತ್ಯವಿರುವ ರಾಷ್ಟ್ರಗಳಿಗೆ ಔಷಧಿ ರವಾನಿಸಲು ಒಪ್ಪಿಗೆ ನೀಡುತ್ತಿದ್ದಂತೇ ಅಮೆರಿಕಾ ಅಧ‍್ಯಕ್ಷರ ವರಸೆ ಬದಲಿದೆ.>   ‘ಮೋದಿ ಉತ್ತಮ ಮನುಷ್ಯ. ಭಾರತ ಒಳ್ಳೆಯ ಮಿತ್ರ’ ಎಂದು ಟ್ರಂಪ್ ಹಾಡಿ ಹೊಗಳಿದ್ದಾರೆ. ಇದೀಗ ಭಾರತದಲ್ಲಿ ತಯಾರಾಗುವ ಮಲೇರಿಯಾ ಔಷಧಗಳಿಗೆ ವಿಶ್ವದ ನಾನಾ ರಾಷ್ಟ್ರಗಳು ಬೇಡಿಕೆಯಿಟ್ಟಿವೆ.ಇದರಲ್ಲಿ ಇನ್ನಷ್ಟು ಓದಿ :