ನವದೆಹಲಿ: ಕೊರೋನಾ ಹರಡಿದ ಚೀನಾ ಮೇಲೆ ಅಮೆರಿಕಾ ತಿರುಗಿಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ನಡುವೆ ಚೀನಾ ಭಾರತದ ಗಡಿಯಲ್ಲಿ ತಕರಾರು ತೆಗೆದಿರುವುದೂ ಅಮೆರಿಕಾ ಕೆಂಗಣ್ಣಿಗೆ ಗುರಿಯಾಗಿದೆ.ಲಡಾಖ್ ನಲ್ಲಿ ಸೇನೆ ಜಮಾಯಿಸಿ ಭಾರತದ ವಿರುದ್ಧ ಕಾಲು ಕೆರೆಯುತ್ತಿರುವ ಚೀನಾ ವಿರುದ್ಧ ಅಮೆರಿಕಾ ವಿದೇಶಾಂಗ ಸಮಿತಿ ಮುಖ್ಯಸ್ಥ ಎಲಿಯಟ್ ಏಂಜಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿನಾಕಾರಣ ಭಾರತದ ವಿರುದ್ಧ ಯಾಕೆ ಗಡಿ ತಂಟೆ ಮಾಡುತ್ತಿದ್ದೀರಿ? ಅಕ್ರಮಣಕಾರಿ ಹಾದಿ ಬಿಟ್ಟು ರಾಜತಾಂತ್ರಿಕ ದಾರಿಯನ್ನು ನೋಡಿಕೊಳ್ಳಿ ಎಂದು