ಅಮೇರಿಕಾದ ವಿರುದ್ಧ ಇರಾನ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ನೀಡಲು ಕಾರಣವೇನು?

ಟೆಹರಾನ್, ಬುಧವಾರ, 18 ಜುಲೈ 2018 (11:58 IST)

ಟೆಹರಾನ್ : 2015ರಲ್ಲಿ ಜಾಗತಿಕ ಶಕ್ತ ದೇಶಗಳು ಇರಾನ್ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಹೊರಗೆ ಬಂದು ಇರಾನ್ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಮರುಘೋಷಿಸಿರುವ ಹಿನ್ನಲೆಯಲ್ಲಿ ಇದೀಗ ಅಮೇರಿಕಾದ ವಿರುದ್ಧ ಇರಾನ್ ನ್ಯಾಯಾಲಯದಲ್ಲಿ ದೂರು ನೀಡಿದೆ ಎಂಬುದಾಗಿ ತಿಳಿದುಬಂದಿದೆ.


ಈ ವಿಚಾರವನ್ನು ಇರಾನ್ ವಿದೇಶ ಸಚಿವಾಲಯ ತಿಳಿಸಿದ್ದು, ‘ಇರಾನ್ ವಿರುದ್ಧ ಏಕಪಕ್ಷೀಯ ಆರ್ಥಿಕ ದಿಗ್ಬಂಧನಗಳನ್ನು ಕಾನೂನುಬಾಹಿರವಾಗಿ ಮರುಹೇರಿರುವುದಕ್ಕೆ ಅಮೆರಿಕವನ್ನು ಉತ್ತರದಾಯಿಯಾಗಿಸುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ’ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.


ಹಾಗೇ ‘ರಾಜತಾಂತ್ರಿಕತೆ ಮತ್ತು ಕಾನೂನುಬದ್ಧ ಬದ್ಧತೆಗಳಿಗೆ ಅಮೆರಿಕ ತಿರಸ್ಕಾರ ಹೊಂದಿರುವ ಹೊರತಾಗಿಯೂ ಕಾನೂನಿನ ಆಡಳಿತಕ್ಕೆ ಇರಾನ್ ಬದ್ಧವಾಗಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುವ ಅದರ ಹವ್ಯಾಸವನ್ನು ಪ್ರಶ್ನಿಸುವುದು ಅಗತ್ಯವಾಗಿದೆ ‘ ಎಂದು ಅವರು ಹೇಳಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಕುಮಾರಸ್ವಾಮಿ ಏರ್ಪಡಿಸಿದ ಸಂಸದರ ಸಭೆಗೆ ಆಗಮಿಸುವವರಿಗೆ ‘ಗಿಫ್ಟ್ ವಿವಾದ’

ನವದೆಹಲಿ: ಇಂದು ದೆಹಲಿಯಲ್ಲಿ ಕಾವೇರಿ ನದಿ ಪ್ರಾಧಿಕಾರ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ...

news

ನನಗೂ ರೌಡಿ ಶೀಟರ್ ಸೈಕಲ್ ರವಿಗೂ ಸಂಬಂಧವಿಲ್ಲ: ಎಂಬಿ ಪಾಟೀಲ್ ಸ್ಪಷ್ಟನೆ

ಬೆಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ಎಂಬಿ ಪಾಟೀಲ್ ಜತೆಗೆ ಕುಖ್ಯಾತ ರೌಡಿ ಸೈಕಲ್ ರವಿ ದೂರವಾಣಿ ಮೂಲಕ ...

news

ಇಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ಪ್ರವಾಸ

ಬೆಂಗಳೂರು: ಶಾಸಕರಾಗಿ ತಮಗೆ ಮರು ಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ...

news

ಸೋನಿಯಾ ಗಾಂಧಿಯನ್ನು ‘ವಿದೇಶಿ’ ಎಂದಿದ್ದಕ್ಕೆ ತನ್ನ ಪಕ್ಷದ ನಾಯಕನಿಗೆ ಮಾಯಾವತಿ ನೀಡಿದ ಶಿಕ್ಷೆಯೇನು ಗೊತ್ತಾ?!

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಬಿಜೆಪಿ ವಿರುದ್ಧ ಹೋರಾಡಲು ಮುಂದಾಗಿರುವ ಮಾಯಾವತಿ ...