ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಬ್ಬಿಕೊಂಡ ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದೇನು ಗೊತ್ತಾ?

ಇಸ್ಮಾಮಾಬಾದ್| Krishnaveni K| Last Modified ಭಾನುವಾರ, 19 ಆಗಸ್ಟ್ 2018 (12:48 IST)

ಇಸ್ಮಾಮಾಬಾದ್: ಮಾಜಿ ಕ್ರಿಕೆಟಿಗ, ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಹೋಗಿದ್ದ ಭಾರತದ ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ತಮ್ಮ ಅನುಭವ ಹಂಚಿಕೊಂಡಿದ್ದಾರೆ.


ಇಮ್ರಾನ್ ಖಾನ್ ಸಿಧು ಅಲ್ಲದೆ, ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಗೂ ಆಹ್ವಾನವಿತ್ತಿದ್ದರು. ಆದರೆ ಸಿಧು ಮಾತ್ರ ಸಮಾರಂಭಕ್ಕೆ ಹಾಜರಾಗಿದ್ದರು. ಹೀಗಾಗಿ ಖುಷಿಯಾದ ಇಮ್ರಾನ್, ಸಿಧುರನ್ನು ತಬ್ಬಿಕೊಂಡು ಮುಂದಿನ ಸಾಲಿನಲ್ಲೇ ಕೂರಿಸಿದರಂತೆ.


ಮುಂದಿನ ಸಾಲಿನಲ್ಲಿ ಕುಳಿತಿದ್ದ ಸಿಧು ಬಳಿ ಬಂದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮಾರ್ ಜಾವೇದ್ ಬಾಜ್ವಾ ತಾವೇ ಬಂದು ಪರಿಚಯಿಸಿಕೊಂಡರಂತೆ. ಅಲ್ಲದೆ, ಸಿಧು ಅಪ್ಪಿಕೊಂಡು ಕಿವಿಯಲ್ಲಿ
ನಾನೂ ಹಿಂದೊಮ್ಮೆ ಕ್ರಿಕೆಟಿಗನಾಗಲು ಬಯಸಿದ್ದೆ ಎಂದರಲ್ಲದೆ, ನಾವು ಶಾಂತಿ ಬಯಸುತ್ತೇವೆ ಎಂದಿದ್ದಾರಂತೆ. ಹಾಗಂತ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಧು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :