ನವದೆಹಲಿ: ನೇಪಾಳ ಪ್ರಧಾನಿ ಕೆಪಿ ಒಲಿ ರಾಮ ಜನಿಸಿದ್ದು ಭಾರತದಲ್ಲಿ ಅಲ್ಲ, ನೇಪಾಳದಲ್ಲಿ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡುತ್ತಿದ್ದಂತೇ ರಾಮ ಜನ್ಮಭೂಮಿ ಬಗ್ಗೆ ಹೊಸದೊಂದು ವಿವಾದ ಹುಟ್ಟಿಕೊಂಡಿದೆ. ಉತ್ತರ ಪ್ರದೇಶದ ಅಯೋಧ್ಯೆಯೇ ರಾಮಜನ್ಮಭೂಮಿ ಎಂಬುದು ಭಾರತೀಯ ಆಸ್ಥಿಕರ ನಂಬಿಕೆ. ಆದರೆ ಇದೀಗ ಕೆಪಿ ಒಲಿ ಭಾರತದ ವಾದ ಸುಳ್ಳು, ರಾಮ ಹುಟ್ಟಿದ್ದು, ನೇಪಾಳದ ಅಯೋಧ್ಯೆಯಲ್ಲಿ. ಅದು ನೇಪಾಳದ ಥೋರಿ ಎಂಬಲ್ಲಿದೆ ಎಂದು ವಾದ ಮಂಡಿಸಿದ್ದಾರೆ. ಆದರೆ ಅದಕ್ಕೆ ತಕ್ಕ ಪುರಾವೆ