ಪರಿಸರ ಹೋರಾಟಗಾರ್ತಿ ಗ್ರೆಟಾ ಬಗ್ಗೆ ಟ್ರಂಪ್ ಮಾಡಿರುವ ಟ್ವೀಟ್‌ ಗೆ ನೆಟ್ಟಿಗರು ಕಿಡಿಕಾರಿದ್ದೇಕೆ?

ನ್ಯೂಯಾರ್ಕ್| pavithra| Last Modified ಬುಧವಾರ, 25 ಸೆಪ್ಟಂಬರ್ 2019 (12:00 IST)
ನ್ಯೂಯಾರ್ಕ್ : ಸ್ವೀಡನ್‌ ನ ಪರಿಸರ ಹೋರಾಟಗಾರ್ತಿಯ ಹೇಳಿಕೆಯ ಕುರಿತಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾಡಿರುವ ಟ್ವೀಟ್‌ ಗೆ ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ.ಹವಾಮಾನ ಶೃಂಗಸಭೆಯಲ್ಲಿ ಭಾಷಣ ಮಾಡಿದ್ದ ಸ್ವೀಡನ್‌ನ ಪರಿಸರ ಹೋರಾಟಗಾರ್ತಿ, 16 ವರ್ಷದ ಗ್ರೆಟಾ ಟನ್‌ಬರ್ಗ್, 'ವಿಶ್ವನಾಯಕರು ಬರೀ ಮಾತನಾಡುತ್ತಾರೆ ಅಷ್ಟೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಡೆಯಲು ಜಾಗತಿಕ ನಾಯಕರೇ, ನೀವು ವಿಫಲರಾಗಿದ್ದೀರಿ. ನಿಮಗೆಷ್ಟು ಧೈರ್ಯ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


ಈ ವಿಡಿಯೊವನ್ನೂ ಟ್ರಂಪ್ ಟ್ವೀಟ್ ಮಾಡಿ 'ಅತ್ಯಂತ ಉಜ್ವಲ ಮತ್ತು ಅಭೂತಪೂರ್ವ ಭವಿಷ್ಯವನ್ನು ಎದುರುನೋಡುತ್ತಿರುವ ಅತ್ಯಂತ ಸಂತುಷ್ಟ ಬಾಲಕಿಯಂತೆ ನನಗೆ ಭಾಸವಾಗುತ್ತದೆ. ಇದನ್ನು ನೋಡಲು ಸಂತಸವಾಗುತ್ತದೆ' ಎಂದು ತಿಳಿಸಿದ್ದರು.  ಈ ಟ್ವೀಟ್ ಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಈ ಬಾಲಕಿಯನ್ನು ಗುರಿಯಾಗಿಸಿಕೊಂಡು ಟ್ರಂಪ್ ಟೀಕೆ ಮಾಡಬಾರದಿತ್ತು ಎಂದು ಹಲವರು ಕಿಡಿಕಾರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :