ನಾಯಿ ಹುಟ್ಟುಹಬ್ಬ ಆಚರಿಸಲು 11 ಲಕ್ಷ ರೂ. ಖರ್ಚು ಮಾಡಿದಳು!

ಬೀಜಿಂಗ್| Krishnaveni K| Last Modified ಭಾನುವಾರ, 9 ಜನವರಿ 2022 (09:34 IST)
ಬೀಜಿಂಗ್: ಕೆಲವರು ನಾಯಿಯನ್ನೂ ತಮ್ಮ ಮನೆ ಮಕ್ಕಳಂತೇ ಸಾಕುತ್ತಾರೆ. ಅದೇ ರೀತಿ ಚೀನಾದ ಮಹಿಳೆಯೊಬ್ಬಳೂ ತನ್ನ ನಾಯಿಯನ್ನು ಅಷ್ಟು ಮುದ್ದಾಗಿ ಸಾಕಿದ್ದಳು. ಇದೀಗ ಆ ನಾಯಿಯ ಹುಟ್ಟುಹಬ್ಬ ಆಚರಿಸಲು ಬರೋಬ್ಬರಿ 11 ಲಕ್ಷ ರೂ.ಗಳಷ್ಟು ಖರ್ಚು ಮಾಡಿ ಸುದ್ದಿಯಾಗಿದ್ದಾಳೆ.

ಮಹಿಳೆಗೆ ಈ ನಾಯಿಯೆಂದರೆ ಅಚ್ಚುಮೆಚ್ಚಾಗಿತ್ತು. ಹೀಗಾಗಿ ಅದರ 10 ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಆಚರಿಸಿದ್ದಾಳೆ.


ನದಿಯೊಂದರ ಪಕ್ಕ ಅದ್ಧೂರಿ ಸೆಟ್ ನಲ್ಲಿ, 520 ಡ್ರೋಣ್ ಗಳನ್ನು ಬಾಡಿಗೆಗೆ ಪಡೆದು ಅವುಗಳಿಂದ ನಾಯಿಗೆ ವಿಶ್ ಮಾಡಿಸಿ, ಭರ್ಜರಿ ಕೇಕ್ ತಯಾರಿಸಿ ಆಪ್ತರನ್ನು ಕರೆದು ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದಾಳೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ.


ಇದರಲ್ಲಿ ಇನ್ನಷ್ಟು ಓದಿ :