ಕ್ಯಾಲಿಫೋರ್ನಿಯಾ: ಹೀಗೂ ಮದುವೆ ಆಕ್ತಾರಾ...? ಏನೋಪ್ಪಾ.. ಇಲ್ಲೊಬ್ಬ 45 ವರ್ಷದ ಯುವತಿ ರೈಲು ನಿಲ್ದಾಣವನ್ನೇ ಮದುವೆಯಾಗಿದ್ದಾಳೆ ಕಣ್ರಿ... ಕಳೆದ 36 ವರ್ಷಗಳಿಂದ ಈಕೆ ಸಾಂತಾ ಫೆ ರೈಲು ನಿಲ್ದಾಣವನ್ನು ಪ್ರೀತಿಸುತ್ತಿದ್ದಾಳಂತೆ, ಅಷ್ಟೇ ಅಲ್ಲ ಮಾನಸಿಕವಾಗಿ ಅದರ ಜೊತೆಗೆ ಸಂಭೋಗ ಕೂಡ ನಡೆಸಿದ್ದಾಳಂತೆ. ಕ್ಯಾಲಿಫೋರ್ನಿಯಾದ ಕರೋಲ್ ಸೇಂಟ್ ಎಂಬುವವರು ಸಾಂಟಾ ಫೆ ರೈಲು ನಿಲ್ದಾಣಕ್ಕೆ ತಮ್ಮ ಒಂಭತ್ತನೇ ವಯಸ್ಸಿನಿಂದ ಬರುತ್ತಿದ್ದಾರಂತೆ. ಆಗನಿಂದಲೂ ಇವರಿಗೆ ರೈಲು ನಿಲ್ದಾಣದ ಮೇಲೆ ವಿಚಿತ್ರ ಪ್ರೀತಿ.