ಯುವತಿಯ ಮೇಲೆ ರೇಪ್ ಎಸಗಿದ ನಕಲಿ ಅಧಿಕಾರಿ

ಬೆಂಗಳೂರು, ಬುಧವಾರ, 20 ಮಾರ್ಚ್ 2019 (19:41 IST)

ದುಬೈ: ಪಾರ್ಕ್‌ನಲ್ಲಿ ಗೆಳೆಯನೊಂದಿಗೆ ಕುಳಿತಿದ್ದ ಯುವತಿಯನ್ನು ಬೆದರಿಸಿದ ನಕಲಿ ಅಧಿಕಾರಿಯೊಬ್ಬ ಆಕೆಯನ್ನು ಬಲವಂತವಾಗಿ ಕರದೆುಕೊಂಡು ಹೋಗಿ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ. 
ಪಾಕಿಸ್ತಾನದಿಂದ ಉದ್ಯೋಗಕ್ಕಾಗಿ ದುಬೈಗೆ ಆಗಮಿಸಿದ್ದ ಮಹಿಳೆ ತನ್ನ ಗೆಳೆಯನೊಂದಿಗೆ ಪಾರ್ಕ್‌ನಲ್ಲಿ ವಿಹರಿಸುತ್ತಿದ್ದರು. ಅಲ್ಲಿಗೆ ಬಂದ 46 ವರ್ಷದ ಬಾಂಗ್ಲಾ ಮೂಲದ ವ್ಯಕ್ತಿಯೊಬ್ಬ ತಾನು ಮುನ್ಸಿಪಾಲಿಟಿಯಲ್ಲಿ ಅಧಿಕಾರಿಯಾಗಿದ್ದು 500 ದಿನಾರ್ ದಂಡ ಪಾವತಿಸಿ ಇಲ್ಲವಾದಲ್ಲಿ ಪೊಲೀಸ್ ಠಾಣೆಗೆ ಬನ್ನಿ ಎಂದು ಒತ್ತಾಯಿಸಿದ್ದಾನೆ. 
 
ಪಾರ್ಕ್‌ಗೆ ಬಂದ ನಕಲಿ ಅಧಿಕಾರಿ ತನ್ನ ಗುರುತಿನ ಚೀಟಿ ತೋರಿಸಿ ಸಂಜೆ 6 ಗಂಟೆಯ ನಂತರ ಪಾರ್ಕ್‌ನಲ್ಲಿ ಕುಳಿತಿರುವುದು ಅಪರಾಧವಾಗಿದ್ದು, ನಿನ್ನ ಜೊತೆ ಯುವಕ ಯಾರು ಎಂದು ಅವನಿಗೆ ನಿನಗೆ ಏನು ಸಂಬಂಧ ಎಂದು ಪ್ರಶ್ನಿಸಿದ್ದಾನೆ.
 
ನನ್ನ ಗೆಳೆಯನಿಗೆ ರೇಪ್, ಸೇರಿದಂತೆ ಇತರ ಕೇಸ್‌ಗಳನ್ನು ದಾಖಲಿಸುವುದಾಗಿ ಬೆದರಿಸಿದ್ದಾನೆ. ಇದರಿಂದ ಕಂಗಾಲಾದ ಗೆಳೆಯ ಮೌನವಾಗಿದ್ದಾನೆ. ಕೂಡಲೇ ನಕಲಿ ಅಧಿಕಾರಿ ನನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಒಂದು ವೇಳೆ ಕಿರುಚಿದಲ್ಲಿ ಹತ್ಯೆಗೈದು ಸಮುದ್ರಕ್ಕೆ ಎಸೆಯುವುದಾಗಿ ಬೆದರಿಸಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ವಿರುದ್ಧ ಸುಮಲತಾ ಕಿಡಿ

ನನ್ನ ಅಸ್ತಿತ್ವಕ್ಕಾಗಿಯೂ ಅಲ್ಲ, ನಾನು ನನ್ನ ಅಸ್ತಿತ್ವವನ್ನ ಸಿನಿಮಾರಂಗದ ಮೂಲಕ ಕಾಪಾಡಿಕೊಂಡಿದ್ದೇನೆ. ...

news

ತಹಸೀಲ್ದಾರ್ ಕಚೇರಿಗೆ ಕೊಡ ಒಯ್ದು ಧರಣಿ ನಡೆಸಿದ ನೀರೆಯರು

ಹತ್ತಾರು ನೀರೆಯರು ನೀರಿಗಾಗಿ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

news

ಸುಂಟರಗಾಳಿಗೆ ಬೆಚ್ಚಿ ಬಿದ್ರು ಆ ಊರಿನ ಜನ್ರು

ಏಕಾಏಕಿಯಾಗಿ ಕಾಣಿಸಿಕೊಂಡ ಭಾರಿ ಪ್ರಮಾಣದ ಸುಂಟರಗಾಳಿಗೆ ಆ ಊರಿನ ಜನರು ಬೆಚ್ಚಿ ಬಿದ್ದ ಘಟನೆ ನಡೆದಿದೆ.

news

ಪಕ್ಷ ಕಟ್ಟಿದವರೇ ಇಲ್ಲಿ ಎದುರಾಳಿಗಳು

ಚುನಾವಣೆ ರಣ ಕಣ ಕಾವೇರಿತ್ತಿರುವಂತೆ ಹಲವು ವಿಶೇಷತೆಗಳು ಕಣದಲ್ಲಿ ಗಮನ ಸೆಳೆಯುತ್ತಿವೆ. ಈ ಹಿಂದೆ ಜತೆ ...