ಬೀಜಿಂಗ್:ಕೆಲವೊಮ್ಮೆ ಈ ಭಕ್ತ ಮಹಾಶಯರ ಭಯ-ಭಕ್ತಿ ಏನೆಲ್ಲ ಫಜೀತಿ ಮಾಡತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಚೀನಾದ ಈ ಅಜ್ಜಿ ಭಗವಂತಾ ಕಾಪಾಡಪ್ಪಾ ಎನ್ನುತ್ತಾ ವಿಮಾನದ ಎಂಜೀನ್ ಗೆ ನಾಣ್ಯವನ್ನು ಎಸೆದುಬಿಟ್ಟಿದೆ ನೋಡಿ. ಭಕ್ತರು ದೇವರ ಹುಂಡಿಗೆ, ನದಿಗಳಿಗೆ, ಆರತಿ ತಟ್ಟೆಗೆ ನಾಣ್ಯ ಹಾಕೋದನ್ನು ನಾವು ನೋಡಿದ್ದೇವೆ. ಆದರೆ ಈ ಅಜ್ಜಿ ಹೀಗೇಕೆ ಮಾಡಿದ್ದಾರೆ ಗೊತ್ತಿಲ್ಲ. ಮಗ, ಸೊಸೆಯೊಂದಿಗೆ ಶಾಂಘೈನಿಂದ ಗುವಾಂಗ್ಜುಗೆ ಹೊರಟಿದ್ದ ಅಜ್ಜಿ, ವಿಮಾನಹತ್ತುತ್ತಿದ್ದಂತೆ, ಭಗವಂತಾ, ಕಾಪಾಡಪ್ಪಾ.