ಮೆಟ್ರೋ ಬಸ್ ಚಾಲಕನೊಬ್ಬ ಸಂತೋಷದ ದಿನವಾಗಲಿ ಎಂದು ಹೇಳಿದ್ದಕ್ಕಾಗಿ ಮಹಿಳೆಯೊಬ್ಬಳು ಆಕ್ರೋಶದಿಂದ ಆತನ ಮೇಲೆ ಮೂತ್ರ ಎಸೆದು ಪೊಲೀಸ್ ಅತಿಥಿಯಾದ ಘಟನೆ ವರದಿಯಾಗಿದೆ. ಆಗ್ನೇಯ ವಾಷಿಂಗ್ಟನ್ ನಗರದ ನಿವಾಸಿಯಾದ 28 ವರ್ಷ ವಯಸ್ಸಿನ ಮಹಿಳಾ ಆರೋಪಿ ಓಪಲ್ ಎಲ್.ಬ್ರೌನ್ರನ್ನು ಎಲ್. ಇನ್ಫಾಂಟ್ ಪ್ಲಾಜಾದಲ್ಲಿ ಬಂಧಿಸಲಾಗಿದೆ. ಮೆಟ್ರೋ ವಕ್ತಾರರ ಪ್ರಕಾರ, ಬಸ್ ಚಾಲಕ ಸರಳವಾಗಿಯೇ ಮಹಿಳೆಗೆ ಸಂತೋಷದ ದಿನವಾಗಲಿ ಎಂದು ಹಾರೈಸಿದ್ದಾನೆ. ಆದರೆ, ಆಕೆ ತಪ್ಪಾಗಿ ಅರ್ಥ ಮಾಡಿಕೊಂಡು ತಾನು