ಲಂಡನ್ : ಬ್ರಿಟನ್ನ ಹಾಲಿ ರಾಣಿ 2ನೇ ಎಲಿಜಬೆತ್ (96), ವಿಶ್ವದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಎರಡನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.ಈ ಮೂಲಕ ಇದುವರೆಗೂ 2ನೇ ಸ್ಥಾನದಲ್ಲಿದ್ದ ಥಾಯ್ಲೆಂಡ್ನ ರಾಜ ಭೂಮಿಬೋಲ್ ಅದ್ಯುಲ್ದೇಜ್ ಅವರನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ.1953ರಲ್ಲಿ ಪಟ್ಟಾಭಿಷೇಕವಾಗಿ ಅಧಿಕಾರದ ಗದ್ದುಗೆಯೇರಿದ ರಾಣಿ 2ನೇ ಎಲಿಜಬೆತ್ 2015ರಲ್ಲಿಯೇ ರಾಣಿ ವಿಕ್ಟೋರಿಯಾ ಆಳ್ವಿಕೆಯ ಅವಧಿಯನ್ನು ಮೀರಿಸಿ, ಅತಿ ಹೆಚ್ಚು ಅವಧಿ ಬ್ರಿಟನ್ ಅನ್ನು ಆಳಿದ ರಾಣಿ