ಬೆಟ್ಟದ ತುದಿಯಲ್ಲಿ ಪ್ರಪೋಸ್ ಮಾಡಲು ಹೋಗಿ ಅಪಾಯ ತಂದುಕೊಂಡ ನವಜೋಡಿ!

ನವದೆಹಲಿ| Krishnaveni K| Last Modified ಶುಕ್ರವಾರ, 1 ಜನವರಿ 2021 (09:44 IST)
ನವದೆಹಲಿ: ಬೆಟ್ಟದ ತುದಿ, ಸೂರ್ಯಾಸ್ತಮಾನದ ಸುಂದರ ಗಳಿಗೆಯಲ್ಲಿ ಲವ್ ಪ್ರಪೋಸ್ ಮಾಡಲು ಹೋಗಿ ನವ ಜೋಡಿಯೊಂದು ಅಪಾಯ ತಂದುಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

 
ಆಸ್ಟ್ರೇಲಿಯಾದ ಕೆರಿಂಥಿಯಾ ಬೆಟ್ಟ ಪ್ರದೇಶದಲ್ಲಿ ನವ ಜೋಡಿಯೊಂದು ಪ್ರಪೋಸ್ ಮಾಡಲು ತೆರಳಿತ್ತು. ಬೆಟ್ಟದ ಅಂಚಿನಲ್ಲಿ ನಿಂತು ಪ್ರಿಯಕರ ಲವ್ ಪ್ರಪೋಸ್ ಮಾಡಿದಾಗ ಯುವತಿಯೂ ಖುಷಿಯಿಂದಲೇ ಒಪ್ಪಿಕೊಂಡಳು. ಆದರೆ ಅದಾದ ಬಳಿಕ ನಡೆದಿದ್ದು ಟ್ರ್ಯಾಜಿಡಿ. ಆಯತಪ್ಪಿದ ಯುವತಿ ಬೆಟ್ಟದ ಕಣಿವೆಯೊಳಕ್ಕೆ ಬಿದ್ದಿದ್ದಾಳೆ. ತಕ್ಷಣ ಬಾಯ್ ಫ್ರೆಂಡ್ ಆಕೆಯನ್ನು ಕಾಪಾಡಲು ಹೋಗಿ ಆತನೂ ಅಪಾಯಕ್ಕೆ ಸಿಲುಕಿದ್ದಾನೆ. ಇವರಿಬ್ಬರ ಕಿರುಚಾಟ ಕೇಳಿ ಸ್ಥಳದಲ್ಲಿದ್ದವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅದೃಷ್ಟವಶಾತ್ ಯುವತಿ ಹಿಮದ ರಾಶಿಗೆ ಬಿದ್ದಿದ್ದಾಳೆ. ಹೀಗಾಗಿ ಬದುಕಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿ ಹೆಲಿಕಾಪ್ಟರ್ ಮೂಲಕ ಯುವ ಜೋಡಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಇಬ್ಬರ ಅದೃಷ್ಟ ನೆಟ್ಟಗಿತ್ತು. ಇಲ್ಲದೇ ಹೋದರೆ ಪ್ರಪೋಸ್ ಮಾಡಿದ ಗಳಿಗೆಯಲ್ಲಿ ಇಬ್ಬರೂ ಪರಲೋಕಕ್ಕೆ ಪ್ರಯಾಣಿಸಬೇಕಿತ್ತು.
ಇದರಲ್ಲಿ ಇನ್ನಷ್ಟು ಓದಿ :