ಕೀವ್ : ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣವು 100ನೇ ದಿನ ಸಮೀಪಿಸುತ್ತಿದೆ.ಈ ಹೊತ್ತಿನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾ ಸುಮಾರು 2 ಲಕ್ಷ ಮಕ್ಕಳನ್ನು ಬಲವಂತವಾಗಿ ಕರೆದೊಯ್ದಿದೆ, 1 ಕೋಟಿಗೂ ಅಧಿಕ ಜನರು ವಲಸೆ ಹೋಗುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.ಅಂತಾರಾಷ್ಟ್ರೀಯ ಮಕ್ಕಳ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಝಲೆನ್ಸ್ಕಿ, ರಷ್ಯಾದ ಕ್ರಿಮಿನಲ್ ಉದ್ದೇಶವು ಮಕ್ಕಳನ್ನು ಅಪಹರಣ ಮಾಡಿರುವುದು ಮಾತ್ರವಲ್ಲದೆ ವಲಸೆ ಹೋದವರು ಮತ್ತೆ ಉಕ್ರೇನ್ಗೆ