ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತನಾಗಿದ್ದೇನೆ. ಇನ್ನಾದರೂ, ಆಡಲು ಅವಕಾಶ ಕೊಡಿ ಎಂದು ಅಂಗಲಾಚುತ್ತಿರುವ ಕೇರಳ ಕ್ರಿಕೆಟಿಗ ಶ್ರೀಶಾಂತ್ ಗೆ ಬಿಸಿಸಿಐ ಬಾಗಿಲು ಮುಚ್ಚಿದೆ. ಬಿಸಿಸಿಐಗೆ ಮೊದಲು ಮನವಿ ಸಲ್ಲಿಸಿದ್ದ ಶ್ರೀಶಾಂತ್ ಯಾವುದೇ ಉತ್ತರ ಸಿಗದಿರುವ ಕಾರಣಕ್ಕೆ ಕೇರಳ ಹೈ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಹೈಕೋರ್ಟ್ ಬಿಸಿಸಿಐಗೆ ಉತ್ತರಿಸುವಂತೆ ನೋಟೀಸ್ ನೀಡಿತ್ತು.ಇದಕ್ಕೆ ಉತ್ತರಿಸಿದ ಬಿಸಿಸಿಐ ಯಾವುದೇ ಕಾರಣಕ್ಕೂ ಕ್ರಿಕೆಟಿಗನ ಮೇಲೆ ವಿಧಿಸಿದ ಅಜೀವ ನಿಷೇಧ ಶಿಕ್ಷೆ ಹಿಂಪಡೆಯಲಾಗುವುದಿಲ್ಲ