ಸರಣಿಯುದ್ದಕ್ಕೂ ಫಾರ್ಮ್ ಕಂಡು ಕೊಳ್ಳಲು ಒದ್ದಾಡುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಬೆಂಗಳೂರಿನಲ್ಲಿ ನಡೆದ ಾರ್ಸಿಬಿ ವಿರುದ್ಧ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಅಷ್ಟೇ ಅಲ್ಲ, ಈ ಸೀಸನ್ನಿನ ಬಿಗ್ಗೆಸ್ಟ್ ಸಿಕ್ಸ್ ಸಿಡಿಸಿ ಸಂಭ್ರಮಿಸಿದ್ದಾರೆ. ಧೋನಿ ಹೊಡೆದ ಸಿಕ್ಸರ್`ನಿಂದಾಗಿ ಬಾಲ್ ಚಿನ್ನಸ್ವಾಮಿ ಸ್ಟೇಡಿಯಂನ ಟೆರೇಸ್ ಸೇರಿತ್ತು. 14ನೇ ಓವರಿನಲ್ಲಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಎಸೆದ ಚೆಂಡನ್ನ ಧೋನಿ ಮುಂದೆ ಬಂದು ಬಾರಿಸಿದರು. ಧೋನಿ ಹೊಡೆದ ಆಕ್ರಮಣಕಾರಿ ಹೊಡೆತಕ್ಕೆ ಚೆಂಡು ಸ್ಟೇಡಿಯಂ ರೂಫ್ ಸೇರಿತು.