ನವದೆಹಲಿ: ಐಪಿಎಲ್ ನಲ್ಲಿ ಇದೀಗ ವಿರಾಟ್ ಕೊಹ್ಲಿಗಿಂತಲೂ, ಧೋನಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ಆಟಗಾರ ಗೌತಮ್ ಗಂಭೀರ್. ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕನ ಪರ ಅಭಿಮಾನಿಗಳು ಅಭಿಯಾನವನ್ನೇ ಶುರು ಮಾಡಿದ್ದಾರೆ. ಮತ್ತೆ ಗಂಭೀರ್ ರನ್ನು ಟೀಂ ಇಂಡಿಯಾಕ್ಕೆ ಕರೆಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. #ಬ್ರಿಂಗ್ ಬ್ಯಾಕ್ ಜಿಜಿ ಎಂಬ ಅಭಯಾನ ಟ್ವಿಟರ್ ನಲ್ಲಿ ಹರಿದಾಡುತ್ತಿದೆ.ಗಂಭೀರ್ ಈ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಸಂಪಾದಿಸಿರುವುದಷ್ಟೇ ಅಲ್ಲ,