ನವದೆಹಲಿ: ಗೌತಮ್ ಗಂಭೀರ್ ಹೆಸರಿನಷ್ಟೇ ಗಂಭೀರ ಪ್ರವೃತ್ತಿಯವರು. ಇತರ ಕ್ರಿಕೆಟಿಗರ ಹಾಗೆ, ಡ್ಯಾನ್ಸ್ ಮಾಡು ಎಂದರೆ ಮಸ್ತ್ ಮಜಾ ಮಾಡುವ ಜಾಯಮಾನವದವರಲ್ಲ. ಇದು ಅವರ ಪತ್ನಿಗೆ ಸುತರಾಂ ಇಷ್ಟವಿಲ್ಲವಂತೆ. ಇದೇ ಕಾರಣಕ್ಕೆ ಪತಿಯ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರಂತೆ ಪತ್ನಿ ನತಾಶ. ಈ ಬಗ್ಗೆ ಸ್ವತಃ ಗಂಭೀರ್ ಹೇಳಿಕೊಂಡಿದ್ದಾರೆ. ಪಂಜಾಬಿ ಪತ್ನಿಯನ್ನು ಕಟ್ಟಿಕೊಂಡ ನನಗೆ ಅವರ ಆಹಾರವೆಲ್ಲಾ ಇಷ್ಟ. ಆದರೆ ಡ್ಯಾನ್ಸ್ ಮಾಡಲಾರೆ. ಇದೇ ವಿಚಾರಕ್ಕೆ ನತಾಶಾ ಹಲವು ಬಾರಿ ಸಿಟ್ಟಾಗಿದ್ದಾಳೆ.