ಮುಂಬೈ: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅದರದ್ದೇ ಆದ ಖದರ್ ಇದೆ. ಅಲ್ಲಿ ಪ್ರತಿಭಾವಂತ ಆಟಗಾರರು ಮಾತ್ರವಲ್ಲ, ಸಹಾಯಕ ಸಿಬ್ಬಂದಿ ಕೂಡಾ ಘಟಾನುಘಟಿಗಳೇ. ಇಂತಹ ಮುಂಬೈ ತಂಡದಲ್ಲಿ ಒಬ್ಬ ಸ್ಪೆಷಲ್ ಆಟಗಾರನಿದ್ದಾನೆ. ಅವರೇ ಖುಲ್ವಂತ್ ಕೆಜ್ರೋಲಿಯೋ. 25 ವರ್ಷದ ಈ ವೇಗಿಯ ಇತಿಹಾಸವೇ ವಿಶೇಷವಾಗಿದೆ. ಇವರು ಮೂಲತಃ ರೆಸ್ಟೋರೆಂಟ್ ಒಂದರಲ್ಲಿ ಬೇರರ್ ಆಗಿದ್ದರಂತೆ!ಗೋವಾದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಖುಲ್ವಂತ್ ರಲ್ಲಿದ್ದ ಪ್ರತಿಭೆ ಗುರುತಿಸಿ ಅವರ ಸ್ನೇಹಿತರೊಬ್ಬರು