ಬೆಂಗಳೂರು: ಮತ್ತೊಂದು ಐಪಿಎಲ್ ಗೆಲ್ಲುವ ಕನಸಿನಲ್ಲಿದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಮುಂಬೈ ಇಂಡಿಯನ್ಸ್ ತಣ್ಣೀರೆರಚಿದೆ. ನಿನ್ನೆ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಕೆಕೆಆರ್ ವಿರುದ್ಧ 6 ವಿಕೆಟ್ ಗೆಲುವು ಕಂಡಿದೆ. ಇದರೊಂದಿಗೆ ಚೊಚ್ಚಲ ಐಪಿಎಲ್ ಗೆಲ್ಲುವ ಕನಸಿನಲ್ಲಿರುವ ಪುಣೆ ಸೂಪರ್ ಜೈಂಟ್ ಮತ್ತು ಎರಡು ಬಾರಿಯ ಚಾಂಪಿಯನ್ ಮುಂಬೈ ಫೈನಲ್ ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.ಇದುವರೆಗೆ ಉತ್ತಮ ಲಹರಿಯಲ್ಲಿದ್ದ ಕೆಕೆಆರ್ ಬ್ಯಾಟಿಂಗ್ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ಟಿದ್ದ ಸೋಲಿಗೆ ಕಾರಣವಾಯಿತು.