ಚೆನ್ನೈ: ಐಪಿಎಲ್ ನಲ್ಲಿ ಒಂದು ಕಾಲದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಧೋನಿ ಎನ್ನುವಷ್ಟು ಜನಪ್ರಿಯವಾಗಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಧೋನಿ ಅನಿವಾರ್ಯವಾಗಿ ಪುಣೆ ತಂಡದ ಪಾಲಾದರು. ಇದೀಗ ಮತ್ತೆ ಅವರು ಚೆನ್ನೈ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆಯೇ?! ಹೌದು ಎನ್ನುತ್ತಿದ್ದಾರೆ ಮಾಲಿಕ ಎನ್. ಶ್ರೀನಿವಾಸನ್. ಚೆನ್ನೈ ತಂಡದ ಮೇಲಿನ ನಿಷೇಧ ಮುಂದಿನ ವರ್ಷದ ಐಪಿಎಲ್ ಗಾಗುವಾಗ ಮುಕ್ತಾಯಗೊಳ್ಳಲಿದೆ. ಹೀಗಾಗಿ ಆ ಆವೃತ್ತಿಗೆ ಮತ್ತೆ ಧೋನಿ ಚೆನ್ನೈ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.