ನವದೆಹಲಿ: ಅದೆಷ್ಟೋ ದಿನಗಳಾಯ್ತು ವಿರಾಟ್ ಕೊಹ್ಲಿ ಮತ್ತು ಬಳಗದ ಮುಖದಲ್ಲಿ ಗೆಲುವಿನ ಕಳೆ ನೋಡಿ. ನಿನ್ನೆ ನಡೆದ ಪಂದ್ಯದಲ್ಲಿ ಕೊನೆಗೂ ಅದು ಸಾಧ್ಯವಾಯ್ತು. ಅಭಿಮಾನಿಗಳೂ ಖುಷಿಯಾದರು. ಕೊನೆಯ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 10 ರನ್ ಗಳ ಗೆಲುವು ಕಂಡ ಆರ್ ಸಿಬಿ ಈ ಐಪಿಎಲ್ ಆವೃತ್ತಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸಮಾಧಾನದೊಂದಿಗೆ ಮನೆಗೆ ಮರಳಿತು.ಡೆಲ್ಲಿಗೆ ಕೊನೆಯ ಓವರ್ ನಲ್ಲಿ 13 ರನ್ ಗಳಿಸಿದ್ದರೆ ಸಾಕಿತ್ತು.