ಹೈದರಾಬಾದ್: ಕ್ಲಾಸ್ ಆಟಗಾರರು ಸಿಡಿದರೆ ಅದರ ಪರಿಣಾಮವೇ ಬೇರೆ ಎನ್ನುವುದನ್ನು ಡೇವಿಡ್ ವಾರ್ನರ್ ತೋರಿಸಿಕೊಟ್ಟರು. ಬಿರುಗಾಳಿಯಂತೆ ಸಿಡಿದ ಅವರ ಶತಕದ ನೆರವಿನಿಂದ ಹೈದರಾಬಾದ್ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 48 ರನ್ ಗಳ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡದ ಪರ ನಾಯಕ ಡೇವಿಡ್ ವಾರ್ನರ್ 59 ಎಸೆತಗಳಲ್ಲಿ ಅಮೋಘ 126 ರನ್ ಸಿಡಿಸಿದರು. ಇದರಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್