ನವದೆಹಲಿ: ಅಂಪಾಯರ್ ತೀರ್ಪಿಗೆ ಅಸಮಧಾನ ವ್ಯಕ್ತಪಡಿಸಿ, ಮೈದಾನದಲ್ಲಿ ಅಶಿಸ್ತಿನ ವರ್ತನೆ ತೋರಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಶೇ. 50 ರಷ್ಟು ದಂಡ ವಿಧಿಸಲಾಗಿದೆ. ಪುಣೆ ರೈಸರ್ಸ್ ವಿರುದ್ಧ ಆಡುವಾಗ ರೋಹಿತ್ ಶರ್ಮಾ ಕೊನೆಯ ಓವರ್ ನಲ್ಲಿ ಅಂಪಾಯರ್ ವೈಡ್ ಎಸೆತವನ್ನು ವೈಡ್ ಎಂದು ತೀರ್ಪು ನೀಡದೇ ಇದ್ದುದಕ್ಕೆ ಅಂಪಾಯರ್ ಎಸ್ ರವಿ ಬಳಿ ವಾಗ್ವಾದ ನಡೆಸಿದ್ದರು.ರೋಹಿತ್ ಶರ್ಮಾರನ್ನು ಬಿಡಿಸಲು ಸ್ಕ್ವೇರ್ ಲೆಗ್ ಅಂಪಾಯರ್ ಮಧ್ಯಪ್ರವೇಶಿಸಬೇಕಾಯಿತು.