ಕೋಲ್ಕೊತ್ತಾ: ಗೆಲುವಿನ ನಾಗಾಲೋಟ ಓಡುತ್ತಿದ್ದ ಕೋಲ್ಕೊತ್ತಾಗೆ ಗುಜರಾತ್ ಮೂಗು ದಾರ ಹಾಕುವಲ್ಲಿ ಯಶಸ್ವಿಯಾಗಿದೆ. ನಾಯಕ ಸುರೇಶ್ ರೈನಾ ನೆರವಿನಿಂದ ಗುಜರಾತ್ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ನಾಲ್ಕು ವಿಕೆಟ್ ಗಳ ಗೆಲುವು ದಾಖಲಿಸಿತು. 188 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಗುಜರಾತ್ ಲಯನ್ಸ್ ಉತ್ತಮ ಆರಂಭ ಪಡೆಯಿತು. ಏರಾನ್ ಪಿಂಚ್ 31 ಮತ್ತು ಬ್ರೆಂಡಮ್ ಮೆಕ್ಕಲಮ್ 33 ರನ್ ಗಳಿಸಿದರು. ನಂತರ ಮಳೆ ಸುರಿದು ಪಂದ್ಯ ಕೆಲ