ಪುಣೆ: ಒಂದೆಡೆ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್! ಇನ್ನೊಂದು ತುದಿಯಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಪ್ರಬಲ ಪುಣೆ ಸೂಪರ್ ಜೈಂಟ್ ಗಳು! ಇವರಲ್ಲಿ ನಿಮ್ಮ ಫೇವರಿಟ್ ಯಾರು? ಪುಣೆ ತಂಡಕ್ಕೆ ಇದೊಂಥರಾ ಅಗ್ನಿ ಪರೀಕ್ಷೆ. ಇದುವರೆಗೆ ನಾಯಕರಾಗಿದ್ದ ಧೋನಿ ಸ್ಥಾನಕ್ಕೆ ಈ ಬಾರಿ ಸ್ಟೀವ್ ಸ್ಮಿತ್ ಬಂದಿದ್ದಾರೆ. ಹೊಸ ನಾಯಕನೊಂದಿಗೆ ಕಣಕ್ಕಿಳಿಯುತ್ತಿರುವ ಪುಣೆಗೆ ಅಜಿಂಕ್ಯಾ ರೆಹಾನೆ, ಬೆನ್ ಸ್ಟೋಕ್ಸ್, ಫಾ ಡು ಪ್ಲೆಸಿಸ್ ರಂತಹ ಘಟಾನುಘಟಿ ನಾಯಕರ