ಪುಣೆ: ಧೋನಿ ಎಷ್ಟೇ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದರೂ, ಅವರ ಮೇಲೆ ಪುಣೆ ಸೂಪರ್ ಜೈಂಟ್ ಮಾಲಿಕ ಸಂಜೀವ್ ಗೊಯೆಂಕಾ ಮನಸ್ಸು ಕರಗುತ್ತಿಲ್ಲ. ಇದೀಗ ಮತ್ತೊಮ್ಮೆ ಧೋನಿಯನ್ನು ತೆಗಳಿ ಸ್ಟೀವ್ ಸ್ಮಿತ್ ರನ್ನು ಹೊಗಳಿ ವಿವಾದಕ್ಕೀಡಾಗಿದ್ದಾರೆ. ಧೋನಿ ಪಂದ್ಯ ಗೆಲ್ಲಿಸಿಕೊಟ್ಟರೂ ಗೊಯೆಂಕಾ ಟೀಂ ಇಂಡಿಯಾದ ಮಾಜಿ ನಾಯಕನ ಮೇಲೆ ಈ ರೀತಿ ವಿಷ ಕಾರುತ್ತಿರುವುದು ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಆಯ್ಕೆಯ ನಾಯಕ ಸ್ಟೀವ್ ಸ್ಮಿತ್ ರನ್ನು