ಹೈದರಾಬಾದ್: ಕೊನೆಗೂ ಇಷ್ಟು ದಿನ ನಡೆದ ಐಪಿಎಲ್ ಜಾತ್ರೆಗೆ ಇಂದು ತೆರೆ ಬೀಳಲಿದೆ. ಹೈದರಾಬಾದ್ ನ ಮೈದಾನದಲ್ಲಿ ಇಂದು ಪುಣೆ ಸೂಪರ್ ಜೈಂಟ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಜಿದ್ದಾ ಜಿದ್ದಿನ ಹೋರಾಟ ನಡೆಯುವ ನಿರೀಕ್ಷೆಯಿದೆ. ಭಾನುವಾರ ಪ್ರೇಕ್ಷಕರಿಗೆ ಫುಲ್ ಮಜಾ ಕೊಡುವುದರಲ್ಲಂತೂ ಅನುಮಾನವಿಲ್ಲ. ಎರಡೂ ತಂಡಗಳು ಸಮಬಲರೇ. ಅದರಲ್ಲೂ ಪುಣೆ ಮುಂಬೈ ಇಂಡಿಯನ್ಸ್ ತಂಡವನ್ನು ಈ ಆವೃತ್ತಿಯಲ್ಲಿ ಮೂರು ಬಾರಿ ಸೋಲಿಸಿ ಮೇಲುಗೈ ಸಾಧಿಸಿದೆ.ಈ ಮೂರೂ ಸೋಲುಗಳಿಗೆ