ಬೆಂಗಳೂರು: ವಿರಾಟ್ ಕೊಹ್ಲಿ ಯಾವಾಗ ಬರುತ್ತಾರೆ ಎಂದು ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಈ ಸುದ್ದಿ ಓದಿ ಖುಷಿಪಡಲೇಬೇಕು. ಭುಜದ ನೋವಿಗೆ ತುತ್ತಾಗಿರುವ ಕೊಹ್ಲಿ ಸುಮಾರು ಒಂದು ತಿಂಗಳಿನಿಂದ ಕ್ರಿಕೆಟ್ ಕಣದಲ್ಲಿಲ್ಲ. ಅಭಿಮಾನಿಗಳೂ ಕಾಯುತ್ತಿದ್ದಾರೆ. ಐಪಿಎಲ್ ಅಭಿಮಾನಿಗಳಂತೂ ಕೊಹ್ಲಿಯಿಲ್ಲದೆ ಎಲ್ಲಾ ಸಪ್ಪೆ ಸಪ್ಪೆ ಎನ್ನುತ್ತಿದ್ದಾರೆ. ಇದೀಗ ಶೀಘ್ರದಲ್ಲೇ ಚೇತರಿಸಿಕೊಳ್ಳಲು ಎಲ್ಲಾ ಪ್ರಯತ್ನ ನಡೆಸುತ್ತಿರುವ ಕೊಹ್ಲಿ ಸದ್ಯದಲ್ಲೇ ಬೆಂಗಳೂರು ತಂಡದೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಬಂದಿದೆ. ನೆಟ್ ಪ್ರಾಕ್ಟೀಸ್ ನಲ್ಲಿ ಬ್ಯಾಟ್