ನವದೆಹಲಿ: ಈ ಐಪಿಎಲ್ ಆವೃತ್ತಿ ವಿರಾಟ್ ಕೊಹ್ಲಿಗೆ ಸಹಿಸಲಾಗದ ನಿರಾಸೆ ತಂದಿಟ್ಟಿದೆ. ಅವರು ಯಾವತ್ತೂ ಧ್ವೇಷಿಸುವ ಸೋಲು ಅವರನ್ನು ಬಿಡದೇ ಕಾಡಿತ್ತು. ಇದು ಅವರ ಮೊಗದಲ್ಲಿ ಸ್ಪಷ್ಟವಾಗಿತ್ತು. ಹಾಗಾಗಿ ಈ ಆವೃತ್ತಿಯ ಐಪಿಎಲ್ ನ್ನು ಮರೆಯಬೇಕಿದೆ ಎಂದು ಅವರು ಪಂದ್ಯದ ನಂತರ ಹೇಳಿಕೊಂಡಿದ್ದಾರೆ. ನಾವೊಂದು ಅವಕಾಶಕ್ಕಾಗಿ ಕಾಯುತ್ತಿದ್ದೆವು. ಹುಡುಗರು ಅದನ್ನು ಇಂದು ಬಳಸಿಕೊಂಡರು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.ಇಷ್ಟು ಪಂದ್ಯಗಳನ್ನು ಸೋತರೂ, 3-4 ಆಟಗಾರರಿದ್ದಾರೆ. ಅವರು ನಿಜಕ್ಕೂ ಶ್ರಮವಹಿಸಿದ್ದಾರೆ. ಅವರ