ಹೈದರಾಬಾದ್: ಸದ್ಯಕ್ಕೆ ಐಪಿಎಲ್ 10 ಚಾಲ್ತಿಯಲ್ಲಿದೆ. ತಂಡಗಳಿಗೆ ನಿದ್ದೆ ಮಾಡಲೂ ಪುರುಸೊತ್ತಿಲ್ಲ. ಅಷ್ಟು ಬ್ಯುಸಿ ಎನ್ನುವುದನ್ನು ಯುವರಾಜ್ ಸಿಂಗ್ ತೋರಿಸಿದ್ದಾರೆ ನೋಡಿ. ಯುವರಾಜ್ ಸಿಂಗ್ ಸಹ ಆಟಗಾರರ ಕಾಲೆಳೆಯುವಲ್ಲಿ ನಿಸ್ಸೀಮ. ಇಂದೂ ಕೂಡಾ ಪಾಪ ಏನೋ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ವಿವಿಎಸ್ ಲಕ್ಷ್ಮಣ್ ಕೆಲ ಕಾಲ ನಿದ್ದೆಗೆ ಜಾರಿದ್ದಾರೆ. ಅದಕ್ಕೇ ಕಾಯುತ್ತಿದ್ದವರಂತೆ ಯುವಿ ನಿದ್ದೆ ಮಾಡುತ್ತಿದ್ದ ಲಕ್ಷ್ಮಣ್ ಫೋಟೋ ತೆಗೆದು ಟ್ವಿಟರ್ ನಲ್ಲಿ ಪ್ರಕಟಿಸಿಯೇ ಬಿಟ್ಟರು.ಪಕ್ಕದಲ್ಲೇ ಕೂತಿದ್ದ ಶ್ರೀಲಂಕಾದ ಮಾಜಿ