ಮುಂಬೈ: ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಬ್ರಿಟಿಷ್ ಮೂಲದ ಮಾಡೆಲ್ ಕೀತ್ ಹೇಝಲ್ ಜತೆ ಒಂದು ವಾರದ ಭರ್ಜರಿ ವಿವಾಹವಾಗಿದ್ದರು. ಮದುವೆಯಾದ ಮೇಲೆ ತಮ್ಮ ಫ್ಯಾಮಿಲಿ ಪ್ಲಾನಿಂಗ್ ಏನು ಎಂಬುದನ್ನು ಕೀತ್ ಬಿಚ್ಚಿಟ್ಟಿದ್ದಾರೆ. ಸದ್ಯ ಯುವಿ ತುಂಬಾ ಬ್ಯುಸಿ. ಪಂದ್ಯ ಮುಗಿಸಿ ಹೋಟೆಲ್ ಕೊಠಡಿಗೆ ಮರಳುವಾಗ ಮಧ್ಯರಾತ್ರಿ ಮೀರಿರುತ್ತದೆ. ಹೀಗಿರುವಾಗ ಪತಿಯನ್ನು ನೋಡುವುದೇ ಅಪರೂಪ. ಹಾಗಿರುವಾಗ ಮಕ್ಕಳ ಮಾತೆಲ್ಲಿ ಬಂತು ಎಂದು ಯುವಿ ಪತ್ನಿ ಅಲವತ್ತುಕೊಂಡಿದ್ದಾರೆ. ಹಾಗಿದ್ದರೂ, ಅದಕ್ಕೆಲ್ಲಾ ಸಮಯವಿದೆ.